9.13.2009

ನೀನೆ ಬರಿ ನೀನೆ

ಜಯಂತ ಕೈಕಿಣಿ, ಮನೋ ಮೂರ್ತಿ, ಸೋನು ನಿಗಮ್ ....ಒ೦ದು ಅದ್ಬುತ ಕಾಂಬಿನೇಶನ್ .. ಸಾಹಿತ್ಯ ಸ೦ಗೀತದ (ಕನ್ನಡ) ಲೋಕದ ಅಪರೂಪದ ಟೀಂ ಇವರದು. ಜಯ೦ತರ ಹಾಡುಗಳು ಆಳವಾದ .... ಕೇಳಿ ಬಹಳ ಸಮಯದ ನ೦ತರವು ಕಾಡುವ ಅನುಬವ ಕೊಡುತ್ತವೆ.

ಮೊನ್ನೆ ಊರಿಗೆ ಹೋಗುವಾಗ ....ನೈಸ್ ಕಾರಿಡಾರ್ ರೋಡಿನಲ್ಲಿ 'ನೀನೆ ಬರಿ ನೀನೆ' ಆಲ್ಬಮ್ನ ಜಾಹಿರಾತುಗಳು. ಇವತ್ತು ವೆಬ್ಸೈಟ್ ನಲ್ಲಿ ಕೇಳಿದೆ. ನನ್ನ ಫೆವರೆಟ್ 'ಬಾ ನೋಡು ಗೆಳತಿ...ನವಿಳುಗರಿಯು ಮರಿ ಹಾಕಿದೆ '. ಈ ಸಿಡಿ .... ಕಾರಿನಲ್ಲಿ ದೂರದ ಪಯಣಕ್ಕೆ ಹೇಳಿ ಮಾಡಿಸಿದ೦ತಿದೆ.

ನೈಸ್ ಮಾಲೀಕ ....ಅಶೋಕ್ ಕೇಣಿಗೆ ಧನ್ಯವಾದಗಳು. ಯಾಕೆ೦ದರೆ ಕನ್ನಡದಲ್ಲಿ ಆಲ್ಬಂಗಳ ಮಾಡುವವರು ಕಡಿಮೆ. ಬರುವವೆಲ್ಲ .... ಕೇಳಿದರೆ ಕೆಟ್ಟದಾಗಿ ಕಾಡುವವೆ.

ಆದಷ್ಟು ಬೇಗ ಸೀಡಿ ಕರೀದಿಸುವೆ.

No comments: