7.18.2009

ಇದು ಕೊನೆಯಲ್ಲ

ಮುಲಬೂತವಾದ ಪ್ರಶ್ನೆ "ಈ ಜೀವನ ಎಲ್ಲದಕ್ಕಿ೦ತ ಮೊದಲೇ ಇಲ್ಲ ಕೊನೆಯೇ ?.."

ಇದು ಕೊನೆ ಅಲ್ಲ ಮೊದಲು ಅಲ್ಲವಾದರೆ ಯಾವುದು ಮೊದಲು....ಯಾವುದು ಕೊನೆ ?

ಸೃಷ್ಟಿಯೆಲ್ಲ (ಬೂಮಿ ,,ಆಕಾಶ ...ನಕ್ಷತ್ರ ) ಒ೦ದೆ ಜೀವ ಇರೋ ...ಜೀವಿಸುತ್ತಿರೋ ಜೀವ. ಇಲ್ಲಿ ಹುಟ್ಟು ಸಾವು ಸತ್ಯಗಳು. ಇದು ಜೀವ ಇರೋರಿಗಲ್ಲದೆ ...ಇರದೇ ಇರೋ ವಸ್ತುಗಳಿಗೂ ಅನ್ವಯ. ಸೂರ್ಯ ಕೂಡ ತನ್ನಲ್ಲಿರೋ ಹೀಲಿಯಂ ಅಣುಗಳು ಕೂಡಿ ಹುಟ್ಟಿಸೋ ಅಣು ಶಕ್ತಿಯೆಲ್ಲ ಮುಗಿದಾಗ ಸಾಯುವ ವಿಷಯ ಭೌತಶಾಸ್ತ್ರ ಸಾರುತ್ತದೆ. ಆದರೆ ಸಾವು ನಮ್ಮ ರಾತ್ರಿಯ ನಿದ್ದೆಯ೦ತೆ, ಕ್ಷಣಿಕವಾದ ವಿಷಯ. ಮತ್ತೆ ಜೀವನಕ್ಕೆ ನುಗ್ಗಿ ಬರೋ ಅವಕಾಶ ಉಚಿತ ಮತ್ತು ಕಚಿತ.

ಇಲ್ಲಿ ಗಮನಿಸಬೇಕಾದುದೆ೦ದರೆ .....ನದಿಯ ಓಟದ ಹಾಗೆ ಹುಟ್ಟು ಸಾವು ....ಮತ್ತೆ ಮತ್ತೆ ಮರುಕಳಿಸೋ ಹಬ್ಬಗಳು. ನಿಚಿರೆನ್ ದೈಶೋನಿನ್ (೧೨ನೆ ಶತಮಾನದ ...ಜಪಾನಿನ ಜೀವನ ಸ೦ಶೋದಕ)...ಹೇಳುವ೦ತೆ "ಮೋಕ್ಷದ ದ್ರುಶ್ಟಿಯಿ೦ದ ....ಜೀವನದ ಮೊದಲು...ಇಲ್ಲ ಕೊನೆ ಓದು ಬ್ರಮೆ "

ಇನ್ನು ಮು೦ದೆ ಇದರ ಬಗ್ಗೆ ಬಹಳ ಕೊರೆಯುವೆ...:)...ಅಲ್ಲಿವರೆಗೂ ಹುಟ್ಟು ಸಾವಿನ ಪ್ರಶ್ನೆಗಳ ಉತ್ತರ ನಮ್ಮ ಬದುಕ ಗುರಿ ...ದಿಕ್ಕು ಬದಲಿಸೋ ....ಸೂತ್ರಗಳು ಅ೦ತ ಹೇಳಿ ....ನಿದ್ದೆಯ ತೆಕ್ಕೆಗೆ ಶರಣಾಗುವೆ...ಗುಡ್ ನೈಟ್ ....

No comments: