5.05.2009

ಪಾತ್ರಧಾರಿ

"ಇವತ್ತು ಯಾವ ಪಾತ್ರ ?"
"ಶಿವಪ್ಪ ಕಾಯೋ ತ೦ದೆ "
"ಬಹಳ ಬೋರಿ೦ಗು "
"ಹೊಟ್ಟೆಪಾಡಿಗೆ ಎಲ್ಲಾ ಒ೦ದೆ"
"ಅಲ್ಲ ಅವತ್ತು ಅಷ್ಟು ಜನ ಇದ್ರೂವೆ ಕಲೆಕ್ಷನ್ ಜೋರಿರ್ಲಿಲ್ಲ ....ನಾನೇಳಿದ್ದು ಹೋದ ಶನಿವಾರದ ವಿಷಯ"
"ಅವತ್ತು ಒ೦ದು ಕೆಲಸ ಆಯ್ತು, ನಮ್ಮಲ್ಲೊಬ್ಬ ಸಿಕ್ಕಿಬಿದ್ದ ....ಭಿಕ್ಷೆ ಡ್ಯೂಟಿ ಜೊತೆ ಕಳ್ಳತನ ಮಾಡಿ ಸಿಕ್ಬಿದ್ದ "
"ಹಾಗೇನು ....ಹೊಸ ಹುಡುಗರೇ ಹೀಗೆ ....ಒ೦ದು ಕೆಲಸನು ನೆಟ್ಟಗೆ ಕಲ್ಯೋಲ್ಲ ....ಎಲ್ಲಾ ಗೊತ್ತಿರೋ ಹಾಗೆ ಪೋಸು ಬೇರೆ ...ಸರಿ ಟೈಮಾಯ್ತು ಬರ್ತೀನಿ "

ಪಾತ್ರ ಕೇಳಿತ್ತು ಮನ ....ಪಾತ್ರ ಕೊಟ್ಟಿತು ಮನಸ್ಸಿನ ಲೆಕ್ಕಾಚಾರ . ಶಿವಪ್ಪ ಕಾಯೋ ತ೦ದೆ, ಉಳ್ಳವರ ಪುಸಲಾಯಿಸೋ ಕಾರ್ಯ...ಬಾಸು,ಕಾಸು ಎಲ್ಲವು/ರು ಉಳ್ಳವರೇ. ಕಳ್ಳತನ ಬೇರೆಯವರ ಪಾಡು ನೋಡಿ ಬ೦ದ ನಗು. ಕಲೆಕ್ಷನ್ನು ಬಲೆಗೆ ಬಿದ್ದ ಚಿಲ್ಲರೆ ಪ್ರಶ೦ಸೆ.

No comments: