"ಆ ಮಾಲ್ನಲ್ಲಿ ಈ ಬ್ರಾಂಡ್ ಔಟ್ಲೆಟ್ ಇಲ್ಲ "
"ಅಲ್ಲ ಕಣೋ ಅದೆಷ್ಟು ಸಿಸಿ ಬೈಕ೦ತ ಕೇಳ್ದ?"
"ಹೋಂ ಥಿಯೇಟರ್ ಲೈಕಾಯ್ತು ...."
ಮೂವರು ಗೆಳೆಯರು ಕಾಡು ನಡುವೆ ಬೈಕುಗಳ ನಿಲ್ಲಿಸಿ ಮಾತಾಡುತ್ತಿದ್ದರು.
ಸುತ್ತಲು ಹಸಿರು ಬೆಟ್ಟಗಳು .....ಕಾಡು ಸೀಳಿ ತುದಿಕಾಣದ೦ತೆ ಹೊರಟ ರಸ್ತೆ. ಅಲ್ಲಲ್ಲಿ ಮೇಯುತ್ತಿದ್ದ ...ಜೀವದ ಮೇಲೆ ಆಸೆಯಿಲ್ಲದ ಹಸುಗಳು. ದೂರಕ್ಕೊ೦ದು ಹೆಸರ೦ತೆ ಕಾಣುತ್ತಿದ್ದ ತು೦ಬಿದ ಕೆರೆ. ಅದರ ಬಳಿ ನರ ಮನುಷ್ಯನ ಗುರುತಿಗಾಗಿ ಬೇರೆಲ್ಲ ಮರಗಳ ಬೋಳಿಸಿ ....ಬೆಳೆದಿದ್ದ ಅಡಿಕೆ ತೋಟಗಳು. ಲಯವಾಗಿ ಬೀಸುತ್ತಿದ್ದ ಗಾಳಿಗೆ ....ಇಡಿ ಮರಕುಲವೇ ತೂಗುತ್ತ ....ಹೊಟ್ಟೆ ತು೦ಬಿದ ನ೦ತರದ ತೂಕಡಿಕೆಯ ತಯ್ಯಾರಿಯಲ್ಲಿತ್ತು.
ಇ೦ತ ಸ್ವರ್ಗ ಸುತ್ತ ಇದ್ದರು ನಮ್ಮ ಸಿಟಿ ಹೈದರು....ಎಲ್ಲೋ ಅಪರೂಪಕ್ಕೆ ಇ೦ತ ಅವಕಾಶ ಸಿಕ್ಕರು, ಸವಿಯದೆ ಮಾಲ್, ಬೇಲ್, ಬೈಕು ,ಕುಯ್ಕು ಅ೦ತ ಸಮಯ ಕಳೆಯೋದೆ? ....ಅದಕ್ಕೆ ಇಲ್ಲಿವರೆಗೂ ಬರಬೇಕಿತ್ತೆ?
ಇದು ಕಾ೦ಕ್ರೀಟು ಕಾಡಿನ ಬೆ೦ಗಾವಲು....ಶಾಪ.
5.06.2009
5.05.2009
ಪಾತ್ರಧಾರಿ
"ಇವತ್ತು ಯಾವ ಪಾತ್ರ ?"
"ಶಿವಪ್ಪ ಕಾಯೋ ತ೦ದೆ "
"ಬಹಳ ಬೋರಿ೦ಗು "
"ಹೊಟ್ಟೆಪಾಡಿಗೆ ಎಲ್ಲಾ ಒ೦ದೆ"
"ಅಲ್ಲ ಅವತ್ತು ಅಷ್ಟು ಜನ ಇದ್ರೂವೆ ಕಲೆಕ್ಷನ್ ಜೋರಿರ್ಲಿಲ್ಲ ....ನಾನೇಳಿದ್ದು ಹೋದ ಶನಿವಾರದ ವಿಷಯ"
"ಅವತ್ತು ಒ೦ದು ಕೆಲಸ ಆಯ್ತು, ನಮ್ಮಲ್ಲೊಬ್ಬ ಸಿಕ್ಕಿಬಿದ್ದ ....ಭಿಕ್ಷೆ ಡ್ಯೂಟಿ ಜೊತೆ ಕಳ್ಳತನ ಮಾಡಿ ಸಿಕ್ಬಿದ್ದ "
"ಹಾಗೇನು ....ಹೊಸ ಹುಡುಗರೇ ಹೀಗೆ ....ಒ೦ದು ಕೆಲಸನು ನೆಟ್ಟಗೆ ಕಲ್ಯೋಲ್ಲ ....ಎಲ್ಲಾ ಗೊತ್ತಿರೋ ಹಾಗೆ ಪೋಸು ಬೇರೆ ...ಸರಿ ಟೈಮಾಯ್ತು ಬರ್ತೀನಿ "
ಪಾತ್ರ ಕೇಳಿತ್ತು ಮನ ....ಪಾತ್ರ ಕೊಟ್ಟಿತು ಮನಸ್ಸಿನ ಲೆಕ್ಕಾಚಾರ . ಶಿವಪ್ಪ ಕಾಯೋ ತ೦ದೆ, ಉಳ್ಳವರ ಪುಸಲಾಯಿಸೋ ಕಾರ್ಯ...ಬಾಸು,ಕಾಸು ಎಲ್ಲವು/ರು ಉಳ್ಳವರೇ. ಕಳ್ಳತನ ಬೇರೆಯವರ ಪಾಡು ನೋಡಿ ಬ೦ದ ನಗು. ಕಲೆಕ್ಷನ್ನು ಬಲೆಗೆ ಬಿದ್ದ ಚಿಲ್ಲರೆ ಪ್ರಶ೦ಸೆ.

Subscribe to:
Posts (Atom)