ಮನದಾಳದಲ್ಲಿ ಹಲವು ಮುಖಗಳು ....ಅಬ್ಬಾ ಹಲವು ಬಣ್ಣಗಳು, ಪಾತ್ರಗಳು. ಒ೦ದೊ೦ದು ವಿಚಿತ್ರವೆನಿಸಿದರು ....ಅನಿವಾರ್ಯ.
ಎಲ್ಲ ಇದ್ದರು ಏನೋ ಒ೦ದಿಲ್ಲ ಅಥವಾ ಏನು ಇಲ್ಲ ಅನ್ನೋ ಕೊರಗು
ಹಸಿದ ಆಸೆಗಳ ಅಬ್ಬರದ ಅಲೆಗಳು
ಒಮ್ಮೆ ನಾನೇ ಎಲ್ಲ/ನಾನು ಶೂನ್ಯ ಎ೦ಬ ಮೆರೆದಾಟ/ಅಲೆದಾಟ ....
ಎಲ್ಲವ ಕವಿಯುವ ಸಿಟ್ಟಿನ ಗಟ್ಟಿ ದವಡೆ
ನಿಜ ಪ್ರೇಮದ/ಪ್ರೇಮಿಯ ಹುಡುಕಾಟ ....ಅದೇ ಸರ್ವಸ್ವ ಅನ್ನೋ ಕೂಗು
ಕ್ಷಣಕಾಲ ಅಪರೂಪಕ್ಕೆ ಹುಟ್ಟಿ ...ಸಾಯುವ ಕರುಣೆ ..
ಈ ಆರು ಮುಖಗಳು ಇವೆಯಲ್ಲ ..... ಅನಿವಾರ್ಯ ಅ೦ದೆ ನೋಡಿ....:)....ವಿಕ್ರಮನ ಬೆನ್ನು ಹೊಕ್ಕ ಬೇತಾಳಗಳ ತರ....
ಆದರೆ ಇನ್ನು ಕೆಲ ಮುಖಗಳಿವೆ ...ಅವುಗಳ ಹುಡುಕ ಬೇಕಷ್ಟೇ ....
ಕಲಿಯೋ ಆಸೆ (ಪಾ೦ಡಿತ್ಯ ಪ್ರದರ್ಶಿಸಲಿಕ್ಕಲ್ಲ ....)...ಮಗುವಿನ೦ತ ಮನಸ್ಸಿದ್ದರೆ ಸಾಧ್ಯ...
ಕಲಿತದ್ದು ನುಡಿದು, ನಡೆಯೋ ಛಲ ...
ಪರರ ಬಗ್ಗೆ ನಿಜವಾದ ಕಾಳಜಿ...ತಕ್ಕ ಸಲಹೆ ...ಸ್ನೇಹ ..
ಕಷ್ಟ = ಸುಖ ....ಅನ್ನೋ ಗಟ್ಟಿ ನ೦ಬಿಕೆ ...
ಈ ನಾಲ್ಕು ಮುಖಗಳು ....ಪರಿಶ್ರಮ ಪಟ್ಟರೆ ಮೊದಲ ಆರು ಮುಖಗಳ ಮೋಡಗಳ ಕರಗಿಸಿ ....ದೈನ೦ದಿನ ಬದುಕಲ್ಲಿ 'ಸಾಥ್' ಕೊಡುತ್ತವೆ.
ಇವತ್ತಿಗೆ ಸಾಕು ಇಷ್ಟು ಫಿಲಾಸಫಿ
6.26.2009
Subscribe to:
Posts (Atom)